Close

NATIONAL TOBACCO CONTROL PROGRAMME (NTCP) TUMAKURU

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ, ಇದು ವಿಶ್ವದಾದ್ಯಂತ ವಷಕ್ಕೆ ೮ ದಶಲಕ್ಷಕ್ಕೂ ಹೆಚ್ಚೂ ಜನರನ್ನು ಕೊಲ್ಲುತ್ತಿದೆ ಹಾಗೂ ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ದಶಲಕ್ಷಗಳಷ್ಟು ಜನರು ಸಾವಿಗೀಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ 1.2 ದಶಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ ವಿಶ್ವಾದಾದ್ಯಂತ ಇರುವ 1.1 ಶತಕೋಟಿ ಧೂಮಪಾನಿಗಳಲ್ಲಿ ಸುಮಾರು 80% ರಷ್ಟು ಜನ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ತಂಬಾಕು ಸಂಬಂಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ. ಭಾರತ ಸರಕಾರ 2007-08ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾ‍ರ್ಯಕ್ರಮವನ್ನು (ಎನ್‌.ಟಿ.ಸಿ.ಪಿ) ಪ್ರಾರಂಬಿಸಿತು. ವಿ‍ಶ್ವ ವಯಸ್ಕರ ತಂಬಾಕು ಸಮೀಕ್ಷೆ (ಜಿ.ಎ.ಟಿ.ಎಸ್‌) 2009-10ರಂತೆ ತಂಬಾಕು ಬಳಕೆಯ ಪ್ರಮಾಣಯನ್ನು ಸೂಚಿಸುತ್ತದೆ. 12ನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ತಂಬಾಕು ಬಳಕೆಯನ್ನು 5% ರಷ್ಟು ಕಡಿಮೆ ಮಾಡುವ ಗುರಿಯನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಹಾಕಿಕೊಳ್ಳಲಾಗಿತ್ತು. ಜಿ.ಎ.ಟಿ.ಎಸ್‌ 2ನೇ ಸಮೀಕ್ಷೆಯ ಪ್ರಕಾರ ತಂಬಾಕು ಬಳಸುವವರ ಸಂಖ್ಯೆ ಸುಮಾರು 81 ಲಕ್ಷ [8.1 ದಶ ಲಕ್ಷ] ಕಡಿಮೆಯಾಗಿದೆ. ಕರ್ನಾಟಕದ ಎಲ್ಲಾ 30 ಜಿಲ್ಲೆಗಳಲ್ಲಿ ಎನ್.ಟಿ.ಸಿ.ಪಿ ಯನ್ನು ಜಾರಿಗೆ ತರಲಾಗಿದೆ. 2015-16ನೇ ಸಾಲಿನಲ್ಲಿ ಎನ್.ಟಿ.ಸಿ.ಪಿಯನ್ನು ಕೋಲಾರ ಜಿಲ್ಲೆಯಲ್ಲಿ ಜಾರಿಗೆ ತರುವಮುಖಾಂತರ 2015-16ನೇ ಸಾಲಿನಿಂದಲೂ ಕೋಲಾರ ಜಿಲ್ಲೆಯಲ್ಲಿ ರಾ.ತ.ನಿ.ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗುತ್ತಿದೆ.

 ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉದ್ದೇಶಗಳು

1. ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.

2. ತಂಬಾಕು ಉತ್ಪನ್ನಗಳ ಸೇವನೆ, ಉತ್ಪಾದನೆ ಮತ್ತು ಪೂರೈಕೆಯನ್ನು ಕಡಿಮೆ ಮಾಡುವುದು.

3. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(ಕೋಟ್ಪಾ)2003 ರನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು.

4. ತಂಬಾಕು ಬಳಕೆಯನ್ನು ತ್ಯಜಿಸಲು ಸೇವೆಯನ್ನು ಒದಗಿಸುವುದು.

5. ತಂಬಾಕು ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ವಿಶ್ವ ಆಯೋಗ್ಯ ಸಂಸ್ಥೆಯ ಎಫ್.ಸಿ.ಟಿ.ಸಿಯ ಕಾರ್ಯತಂತ್ರಗಳನ್ನು ಅನುಷ್ಠಾನ ಮಾಡುವುದು.

 

ರಾಷ್ಟ್ರ ಮಟ್ಟದ ಕಾರ್ಯಕ್ರಮಗಳು

• ಸಾರ್ವಜನಿಕ ಜಾಗೃತಿ, ಸಮೂಹ ಮಾಧ್ಯಮ ಜಾಗೃತಿ ಅಭಿಯಾನ ಮತ್ತು ಸಾಮಾಜಿಕ ವರ್ತನೆ ಬದಲಾವಣೆಗೆ ಅಗತ್ಯ ‍ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

• ರಾಷ್ಟ್ರಮಟ್ಟದಲ್ಲಿ ತಂಬಾಕು ಉತ್ಪನ್ನಗಳ ಪರೀಕ್ಷೆಯ ಪ್ರಯೋಗಾಲಯಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡುವುದು.

• ಇತರೆ ನೋಡಲ್ ಇಲಾಖೆಗಳ ಸಮನ್ವಯದೊಂದಿಗೆ ಪರ್ಯಾಯ ಬೆಳೆಗಳು, ಜೀವನೋಪಾಯಕ್ಕೆ ಅಗತ್ಯವಿರುವ ಸಂಶೋದನೆ ಹಾಗೂ ತರಬೇತಿಗಳನ್ನು ಆಯೋಜಿಸುವುದು.

• ಕಣ್ಗಾವಲು ಸೇರಿದಂತೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಸುವುದು.

• ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಒಂದು ಭಾಗವಾಗಿ ಕಾರ್ಯನಿರ್ವಹಿಸುವುದು.

ರಾಜ್ಯ ಮಟ್ಟದಲ್ಲಿ

• ರಾಜ್ಯ ಮಟ್ಟದಲ್ಲಿ ತಂಬಾಕು ನಿಯಂತ್ರಣ ಮಾಡಲು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮೇಲ್ವಿಚಾರಣೆ ಮಾಡುವುದು.

• ರಾಜ್ಯ ಮಟ್ಟದಲ್ಲಿ ಅಡ್ವಕೆಸಿ ಕಾರ್ಯಾಗಾರಗಳನ್ನು ಆಯೋಜಿಸುವುದು.

• ಜಿಲ್ಲಾ ಮಟ್ಟದಲ್ಲಿ ಎನ್.ಟಿ.ಸಿ.ಪಿ ರ್ಯಕ್ರಮದ ಅಡಿಯಲ್ಲಿ ನೇಮಕಗೊಂಡು ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಗಳನ್ನು ಆಯೋಜಿಸುವುದು.

• ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುನರ್ ಮನನ ತರಬೇತಿಗಳನ್ನು ಆಯೋಜಿಸುವುದು.

• ತಂಬಾಕು ವ್ಯಸನ ಬಿಡಿಸಲು ವ್ಯಸನ ಮುಕ್ತ ಕೇಂದ್ರಗಳಲ್ಲಿ ಕರ್ತವ್ಯ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ವೃತ್ತಿಪರರಿಗೆ ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರಿಗೆ ತರಬೇತಿ ನೀಡುವುದು.

• ಕೋಟ್ಪಾ ಕಾಯ್ದೆಯ ಅನುಷ್ಠಾನ ಮಾಡುವುದು ಕಾನೂನು ಜಾರಿ ಅಧಿಕಾರಿಗಳಿಗೆ ಕಾನೂನು ತರಬೇತಿಗಳನ್ನು ಆಯೋಜಿಸುವುದು.

ಜಿಲ್ಲಾ ಮಟ್ಟದಲ್ಲಿ

• ಕಾನೂನು ಜಾರಿ ಅಧಿಕಾರಿಗಳಿಗೆ ಶಾಲಾ ಶಿಕ್ಷಕರಿಗೆ ಕಾಲೇಜು ಉಪನ್ಯಾಸಕರಿಗೆ ಸಾಮಾಜಿಕ ಕಾರ್ಯಕರ್ತರು ಸರಕಾರೇತರ ಸಂಸ್ಥೆಗಳ ಪ್ರತಿ ನಿಧಿಗಳಿಗೆ ಮತ್ತು ಪಂಚಾಯ್ತಿ ಮಟ್ಟದ ಅಧಿಕಾರಿಗಳಿಗೆ ತರಬೇತಿಗಳನ್ನು ಆಯೋಜಿಸುವುದು.

• ಮಾಹಿತಿ ಶಿಕ್ಷಣ ಸಂವಹನ (ಐ.ಇ.ಸಿ) ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಹದಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡುಸುವುದು.

• ಶಾಲಾ/ಕಾಲೇಜು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಹದಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವುದು.

• ನಗರ ಸ್ಥಳೀಯ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮನ್ವಯದೊಂದಿಗೆ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವುದು.

• ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕೋಟ್ಪಾ ಕಾಯ್ದೆಯ ಉಲ್ಲಂಘನೆಗಳನ್ನು ಪತ್ತೆಮಾಡಿ ಉಲ್ಲಂಘನೆ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವುದು.

ಹೆಚ್ಚಿನ ಮಾಹಿತಿ ಮತ್ತು ಸೇವೆಗಳನ್ನು ಪಡೆಯಲು ಸಂಪರ್ಕಿಸಿರಿ

ಕ್ರಮ ಸಂಖ್ಯೆ ಹೆಸರು ಹುದ್ದೆ ವಿಳಾಸ
1 ಡಾ|| ಮೋಹನ್ ದಾಸ್ ಆರ್.ವಿ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿಗಳು, ಹಾಗೂ ಕಾರ್ಯಾಕ್ರಮಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತುಮಕೂರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ತುಮಕೂರು.

ಮೊಬೈಲ್ ನಂ.9449843269

2 ರವಿಪ್ರಕಾಶ್ ಎಂ.ಆರ್ ಜಿಲ್ಲಾ ಸಲಹೆಗಾರರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತುಮಕೂರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ತುಮಕೂರು.

ಮೊಬೈಲ್ ನಂ.9741785273

3 ರುಕ್ಮಿಣಿ ಟಿ.ಆರ್ ಆಪ್ತಸಮಾಲೋಚಕರು

ಜಿಲ್ಲಾ ಆಸ್ಪತ್ರೆ, ತಂಬಾಕು ವ್ಯಸನ ಮುಕ್ತ, ತುಮಕೂರು.ಕೇಂದ್ರ ಕೂಠಡಿ ಸಂಖ್ಯೆ 04

ಮೊಬೈಲ್ ನಂ.9611467944

ಇದುವರೆವಿಗೂ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ

ಈ ಕೆಳಕಂಡ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ :-

• ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003 ರ ಸೆಕ್ಷನ್ 6(ಬಿ) 100 ಗಜ ಅಂತರದಲ್ಲಿ ಶೈಕ್ಷಣಿಕ ಆವರಣದಲ್ಲಿನ ಧುಮಪಾನ ನಿಷೇಧದ ಬಗ್ಗೆ ಮಾಹಿತಿ ಇರುವ 100 ಸನ್ ಬೋರ್ಡ್ ಗಳನ್ನು ಮಾಡಿಸಿ ಶಾಲೆಗಳಿಗೆ ವಿತರಿಸಲಾಗಿದೆ.

• ತುಮಕೂರು ಜಿಲ್ಲೆಯಾದ್ಯಂತ ಆಯಾ ತಾಲ್ಲೂಕುವಾರು ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ತಂಬಾಕು ದುಷ್ಟರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003 ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರೇಡಿಯೋ ಕಾರ್ಯಕ್ರಮವನ್ನು ಪ್ರಸಾರ ಮಾಡಿಸಲಾಗಿದೆ.

• ಸಿದ್ದಗಂಗಾ ಮಠದಲ್ಲಿ ನಡೆಸಲಾಗುವ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ತಂಬಾಕು ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003 ರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸÀಲಾಗಿದೆ.

• ದಾನ್ ಪೌಂಡೇಶನ್ ಸಹಯೋಗದಲ್ಲಿ ಸುಮಾರು 4000 ಸ್ವ ಸಹಾಯ ಮಹಿಳಾ ಸಂಘದ ಸದಸ್ಯರುಗಳಿಗೆ ಗಾಜಿನ ಮನೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಮಳಿಗೆಯಲ್ಲಿ ಕಿಯ್ಕೋಸ್ ಇಟ್ಟು ಬರುವಂತಹ ಸಾರ್ವಜನಿಕರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಚಿತ್ರಪಟಗಳ ಸಹಾಯದಿಂದ ಜಾಗೃತಿ ಮೂಡಿಸಲಾಗಿದೆ.

• ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತುಮಕೂರು, ವತಿಯಿಂದ ಆಶಾ ಕಾರ್ಯಕರ್ತೆಯರ ಮಾರ್ಗದರ್ಶಿ ಕೈಪಿಡಿ ಮುದ್ರಿಸಿ ತಾಲ್ಲೂಕುವಾರು ವಿತರಿಸಲಾಯಿತು.

ತಂಬಾಕು ವ್ಯಸನ ಮುಕ್ತ ಕೇಂದ್ರ ಜಿಲ್ಲಾ ಆಸ್ಪತ್ರೆ, ತುಮಕೂರು

ತಂಬಾಕು ನಿಯಂತ್ರಣ ಕೋಶದ ಮತ್ತೊಂದು ಭಾಗವಾಗಿ ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿನ ರೂಂ ನಂ. 04 ರಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಲು ತಂಬಾಕು ವ್ಯಸನ ಮುಕ್ತ ಕೇಂದ್ರ ಸ್ಥಾಪಿಸಲಾಗಿದ್ದು, ಇದುವರೆವಿಗೂ,…

• ತಂಬಾಕು ವ್ಯಸನಿಗಳಿಗೆ ಅವರ ತಂಬಾಕು ವ್ಯಸನದ ಅನುಭವವನ್ನು ಹಂಚಿಕೊಳ್ಳಲು ತಂಬಾಕು ಮುಕ್ತರಾಗಲು ಕೇಂದ್ರಿಕೃತ ಗುಂಪು ಚರ್ಚೆ ನಡೆಸಲಾಗುತ್ತಿದೆ.

• ತಂಬಾಕು ವ್ಯಸನ ಮುಕ್ತ ಕೇಂದ್ರದಿಂದ 35 ಕ್ಯಾಂಪ್‍ಗಳನ್ನು ಆಯೋಜಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಮತ್ತು ಎಲ್ಲಾ ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ಶಾಲಾ ಮಕ್ಕಳು & ಆಶಾ ಕಾರ್ಯಕರ್ತೆಯರ ಮುಖಾಂತರ ಪ್ರತಿ ವರ್ಷ ಜಾರಿಗೊಳಿಸಿದ್ದು, ಸದರಿ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಗುಲಾಬಿ ನೀಡುವುದರ ಮೂಲಕ ತಂಬಾಕು ಸೇವನೆಯಿಂದಾಗುವ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ-2003 ಕಾಯ್ದೆಯ ಉಲ್ಗಂಘನೆ ಮಾಡದಂತೆ ಮನವರಿಕೆ ಮಾಡುವುದು ಗುಲಾಬಿ ಆಂದೋಲನದ ಪ್ರಮುಖ ಉದ್ದೇಶವಾಗಿರುತ್ತದೆ.

ಇಲಾಖಾವಾರು ಪ್ರಾಧಿಕೃತ ಅಧಿಕಾರಿ ಹಾಗೂ ಸನ್ನದುದಾರರುಗಳಿಗೆ ತರಬೇತಿ ನೀಡಲಾಗಿದೆ:-

• ಜಿಲ್ಲೆಯ ಎಲ್ಲಾ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಿಗೆ ತಂಬಾಕು ನಿಯಂತ್ರಣ ಕಾನೂನು ನಿಯಮಗಳ ಹಾಗೂ ತಂಬಾಕು ಮುಕ್ತ ತುಮಕೂರು ಮಾಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂಬ ಬಗ್ಗೆ ತರಬೇತಿ ನೀಡಲಾಗಿದೆ.

• ತುಮಕೂರು ಮಹಾನಗರ ಪಾಲಿಕೆಯ ಪ್ರಾಧಿಕೃತ ಅಧಿಕಾರಿಗಳು ಹಾಗೂ ಕ್ಷೇತ್ರ ಆರೋಗ್ಯ ಸಹಾಯಕರುಗಳಿಗೆ ತಂಬಾಕು ನಿಯಂತ್ರಣ ಕಾನೂನು ಹಾಗೂ ಪರವಾನಗಿ ನೀಡುವ ವೇಳೆಯಲ್ಲಿ ಮುಂಜಾಗೃತೆ ವಹಿಸಲು ತಿಳಿಸಲಾಗಿದೆ.

• ಸಾರ್ವಜನಿಕ ಸಾರಿಗೆಯಾದ ಕೆ.ಎಸ್.ಆರ್.ಟಿ.ಸಿ ತುಮಕೂರು ವಿಭಾಗದ ಎಲ್ಲಾ ಪ್ರಾಧಿಕೃತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಸಾರ್ವಜನಿಕ ಸಾರಿಗೆಯಾದ ಕೆ.ಎಸ್,ಆರ್.ಟಿ.ಸಿ ಯ ಬಸ್‍ನಿಲ್ದಾಣ ಹಾಗೂ ಬಸ್‍ಗಳಲ್ಲಿ ಧೂಮಪಾನವಾಗದ ರೀತಿಯಲ್ಲಿ ಮುಂಜಾಗೃತೆ ವಹಿಸಲು ತಿಳಿಸಲಾಗಿದೆ.

• ತುಮಕೂರು ಜಿಲ್ಲೆಯ ಅಬಕಾರಿ ಇಲಾಖೆಯ ಎಲ್ಲಾ ಎಲ್ಲಾ ಪ್ರಾಧಿಕೃತ ಅಧಿಕಾರಿಗಳು ಹಾಗೂ ಬಾರ್, ರೆಸ್ಟೋರೆಂಟ್‍ಗಳ ಸನ್ನದುದಾರರುಗಳಿಗೆ ಕೋಟ್ಪಾ ಕಾನೂನು ನಿಯಮಗಳ ಪಾಲನೆ ಬಗ್ಗೆ ತಿಳುವಳಿಕೆ ನೀಡಲಾಗಿದೆ.

• ಹೋಟೆಲ್ ಮಾಲೀಕರ ಸಹಕಾರ ಸಂಘದ ಸಹಕಾರದೊಂದಿಗೆ ತುಮಕೂರು ನಗರದ ಎಲ್ಲಾ ಹೋಟೆಲ್ ಮಾಲೀಕರುಗಳಿಗೆ ತಂಬಾಕು ನಿಯಂತ್ರಣ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗಿದೆ.

• ಅಗ್ನಿಶಾಮಕ ದಳದ ಎಲ್ಲಾ ಪ್ರಾಧಿಕೃತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ತರಬೇತಿ ನೀಡಲಾಗಿದ್ದು ದೊಡ್ಡ ದೊಡ್ಡ ಮಾಲ್‍ಗಳು ಹಾಗೂ ಇನ್ನಿತರೆ ಆಯಾಮಗಳಿಗೆ ಪರವಾನಗಿ ನೀಡುವ ವೇಳೆಯಲ್ಲಿ ತಂಬಾಕು ನಿಯಂತ್ರಣ ಚಟುವಟಿಕೆಗಳ ಪಾಲನೆಯಾಗಿದೆಯೆ ಎಂಬುದರ ಬಗ್ಗೆ ತಿಳಿದ ನಂತರ ಪರವಾನಗಿ ನೀಡಲು ತಿಳಿಸಿದೆ.

• ಶಿಕ್ಷಣ ಇಲಾಖೆಯ ಎಲ್ಲಾ ಶಾಲಾ ಮುಖೋಪಾಧ್ಯಾಯರುಗಳಿಗೆ ತರಬೇತಿ ನೀಡಲಾಗಿದ್ದು ಪ್ರಮುಖವಾಗಿ ಸೆಕ್ಷನ್ 4 ರ ಪ್ರಕಾರ ಶಾಲಾ ಆವರಣಗಳಲ್ಲಿ ಧೂಮಪಾನವಾಗದ ರೀತಿಯಲ್ಲಿ ಕ್ರಮವಹಿಸಲು ಹಾಗೂ ಸೆಕ್ಷನ್ 6 (ಬಿ) ರೀತ್ಯ ಶಾಲಾ ಆವರಣದಿಂದ 100 ಯಾರ್ಡ್ ಅಂತರದಲ್ಲಿ ಅಂಗಡಿ ಮುಂಗಟ್ಟುಗಳು ಇರದ ರೀತಿಯಲ್ಲಿ ಹಾಗೂ ವ್ಯಪಾರ ವಹಿವಾಟು ನಡೆಯದ ರೀತಿಯಲ್ಲಿ ಕ್ರಮ ವಹಿಸಲು ತಿಳಿಸಲಾಗಿದೆ.

• ತುಮಕೂರು ನಗರದ ಎಲ್ಲಾ ಬೀದಿ ಬದಿ ಹಾಗೂ ತಂಬಾಕು ಉತ್ಪನ್ನ ವ್ಯಾಪಾರಿಗಳಿಗೆ ಹಾಗೂ ಜಿಲ್ಲೆಯ ಪ್ರಮುಖ ತಂಬಾಕು ಉತ್ಪನ್ನಗಳ ಹಂಚಿಕೆದಾರರುಗಳಿಗೆ.

ತಂಬಾಕು ಮುಕ್ತ ತುಮಕೂರು ಮಾಡುವ ನಿಟ್ಟಿನಲ್ಲಿ ತರಬೇತಿಗಳನ್ನು ವಿವಿಧ ಇಲಾಖಾಧಿಕಾರಿಗಳಿಗೆ ನೀಡಲಾಗಿದೆ.

ಸಾರ್ವಜನಿಕರಿಗೆ ತಿಳುವಳಿಕೆ;-

• ಆಟೋ ಮೂಲಕ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೋಟ್ಪಾ-2003 ರ ಕಾನೂನು ನಿಯಮಗಳ ಬಗ್ಗೆ ಪ್ರಚಾರ ಮಾಡಲು ಕೈಗೊಳ್ಳಲಾಗಿದೆ.

• ಭಿತ್ತಿ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಯಾವ ರೀತಿಯಲ್ಲಿ ನಿಯಮಗಳನ್ನು ಪಾಲನೆ ಮಾಡಬೇಕೆಂಬ ಬಗ್ಗೆ ತಿಳಿಸಲು ಕೈಗೊಳ್ಳಲಾಗಿದೆ.

• ಸ್ಥಳೀಯ ದಿನ ಪತ್ರಿಕೆಗಳ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಪ್ರಕಟಣೆ ನೀಡುವ ಮೂಲಕ ತಿಳುವಳಿಕೆ ಮೂಡಿಸಲು ಕೈಗೊಳ್ಳಲಾಗಿದೆ.

• ಸಾರ್ವಜನಿಕರ ಸಾರಿಗೆಯಾದ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್‍ನ ಒಳ ಭಾಗದಲ್ಲಿ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸ್ಟಿಕ್ಕರ್‍ಗಳನ್ನು ಅಂಟಿಸುವ ಮೂಲಕ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಅರಿವನ್ನ ಮೂಡಿಸಲು ಕೈಗೊಳ್ಳಲಾಗಿದೆ